ಒಲವಿನ ಗೀತೆ


"ಕವನ ಸ್ಪರ್ಧೆ"
ಶೀರ್ಷಿಕೆ: ಒಲವಿನ ಗೀತೆ

ಒಲವಿನಾಸರೆ ಬಯಸಿದೆ ನಾನು
ಬಳ್ಳಿಯಾಗಿ ಹೃದಯಕ್ಕೆ ಒರಗಿದೆ ನೀನು
ನಿನ್ನೆದೆಯ ಹರವಿನಲ್ಲಿ ಬರೆದೆನು
ಸುಂದರ ಹೃದಯ ಗೀತೆಯನು.
ತನ್ಮಯ ಹೃನ್ಮಯ ಭಾವಗಳ
ಆತ್ಮ ತೃಪ್ತಿ ಅನಂತ ರಾಗಗಳ
ಹೃದಯ ಗೀತೆಯ ಮಧುರ ನಾದಗಳ
ಅಲೆ ಅಲೆಯಾಗಿ ಅಲೆದಾಡಿದ ಕನಸುಗಳ
‌‌‌ ರಂಗು ರಂಗಿನ ರಂಗವಲ್ಲಿಗಳ
ಚಿತ್ರಗಳೇ ತುಂಬಿವೆ ಕಂಗಳ.
ಕಾಮನ ಬಿಲ್ಲಿನಂತೆ ಬಾಗಿ
ಹೃದಯಕ್ಕೆ ಹೃದಯವು ತಾಗಿ
ಉಸಿರು ಉಸಿರು ಒಂದಾಗಿ
ಜೀವ ಭಾವ ಕಲೆತು ಹಗುರಾಗಿ
ಅಕಾಶಕ್ಕೆ ಹಾರುವ ಪ್ರಣಯ ಹಕ್ಕಿಗಳಾಗಿ.
‌ -ತಾತನಹಳ್ಳಿ. ಬಿ. ಶೇಖರ.

Poem Rating:
Click To Rate This Poem!

Continue Rating Poems


Share This Poem