ಗಣೇಶನಲ್ಲಿ ಐಕ್ಯತೆ


ಮಣ್ಣಾ ಮುದ್ದೆ ಹೊಳೆದು
ಮೂರ್ತಿ ರೂಪ ತಳೆದಿದೆ
ನಿನ್ನ ಪ್ರಕರ ಶಕ್ತಿಗೆ
ಜಗವು ತಲೆ ಬಾಗಿದೆ

ಆದಿ ನೀನು.... ಅಂತ್ಯ ನೀನು..
ಓ.. ಜಗದ ಬೆಳಕು
ತೆರೆಯೊಳು.. ಮರೆಯೊಳು
ನಿನ್ನದೇ ಜಳಕು

ಸತ್ಯ ಐಕ್ಯ ಮೂರ್ತಿ
ಅಣು ಅಣುವಿಗೂ ನೀ ಸ್ಪೂರ್ತಿ

ಅಷ್ಟ ದಿಶೆಗೂ ಆದಿಪ ಚತುರ್ಥ
ಅಷ್ಟ ಗಣಪ ವಿಶಾಲಾರ್ಥ
ಅಷ್ಟ ದ್ರವ್ಯ ಮೋದಕ ಪ್ರಿಯ
ಅಷ್ಟೈಶ್ವರ್ಯ ಪ್ರದಾಯಕ

ಬಲಮುರಿ ಒಡೆಯ ಕೊಡುವ ಸದ್ಗತಿ
ಎಡಮುರಿ ನೀಡುವ ದಿವ್ಯಮತಿ

ಕಾಯಕಕೆ ಅಡಿಗಲ್ಲು
ನಮೋ ಬೆನಕ ಏನಲು
ಒಡನೆ ಜಾರುವುದು ಲೌಕಿಕದ ಜೊಳ್ಳು
ಸಿದ್ದಿವಿನಾಯಕಗೆ ಇಪ್ಪತ್ತೊಂದು ನಮನಗಳು

ಸರ್ವ ಮತ,ಧರ್ಮ ಸಮ್ಮೇಳನದ
ಉತ್ಸವದಿ ಮೆರೆಯುವ ಗಜಾನನ
ವಕ್ರತುಂಡ ನಿನ್ನ ಪಾದಗಳ ಅಡಿ ಎರಗಿ
ಉತ್ಸಾಹದಿ ಮೈಮನ ಮರೆಯುವ ಜನ

ಮಾತೆಗಾಗಿ ಜೀವತೆತ್ತ
ನೀನೇ ಧನ್ಯ ನೀನೇ ಮಾನ್ಯ
ತಿಲಕರ ಧ್ವನಿಯಲ್ಲಿ ಮೊಳಗಿತು .....
ಭಾರತಾಂಬೆಗೆ ನಮನ.... ನಿನ್ನಲ್ಲಿಯೇ ಐಕ್ಯವಾಯಿತು.

Poem Rating:
Click To Rate This Poem!

Continue Rating Poems


Share This Poem