ಮುಖ ವೀಣೆ


" ಚಿತ್ರ ಕ್ಕೊಂದು ಕವನ"
'ಮುಖ ವೀಣೆ"
ನಾದವು ಹೊಮ್ಮುತ್ತಿರುವುದು
ವೀಣೆಯಲ್ಲೊ ಮುಖವೀಣೆಯಲ್ಲೊ.
ಶೃತಿಯು ಸಂಮಿಳಿತಗೊಂಡಿರುವುದು
ನುಡಿಯಲ್ಲೊ ಕಣ್ಣಿನ ಕಿಡಿಯಲ್ಲೊ.
ಯಾವ ಭಾವಕೆ ಯಾವ ನಾದ
ಯಾವ ನೋಟಕೆ ಯಾವ ಗೀತ.
ಅಂತರ್ಭಾವಗಳ ಹರಿದಾಟಕೆ
ಯಾವ ಸಂಗೀತ.
ಮೃದು ಮಧುರ ಸುರ ಸುಂದರ
ಮನ ತಾಕಲಾಟಗಳ ಹಂದರ.
ತೀರದ ನೋಟ
ಮನ ಆನಂದ ತುಂದಿಲ
ಮನದ ರಾಗಕೆ ಗಾನ ಯಾವುದೊ
ಗಾನದ ತಾಳಕೆ ಶೃತಿ ಯಾವುದೊ.
‌ ‌ - ತಾತನಹಳ್ಳಿ ಬಿ ಶೇಖರ.

Poem Rating:
Click To Rate This Poem!

Continue Rating Poems


Share This Poem